ನಾನು ಆ ಹುಡುಗಿಯಲ್ಲ
ನಾನು ನಿಮ್ಮ ಕಲ್ಪನೆಯೊಳಗಿಲ್ಲ
ನನ್ನಲ್ಲಿ ಮಾತುಗಳಿಲ್ಲ... ನಿಮ್ಮನ್ನು ಮೆಚ್ಚಿಸಲು
ನಾನು ನಿಮ್ಮ ಸೀತೆಯಾಗಲಿಲ್ಲ
ತಲೆತಗ್ಗಿಸಿ ಗೊಂಡಾರಣ್ಯಕ್ಕೆ ನಡೆಯಲಿಲ್ಲ
ನಿಮ್ಮ ಬೆನ್ನ ಹಿಂದೆ ನನಗಾಗಿ ಹುಡುಕಾಡಿದಿರಿ
ನಿಮ್ಮ ಬಗಲಿಗೆ ಕಣ್ಣು ಹಾಯಿಸಲಿಲ್ಲ
ನಿಮಗಿಷ್ಟ, ನಿಮ್ಮ ಬೆನ್ನ ಹಿಂದಿನ ಹೆಜ್ಜೆ
ಆದರೆ ಹೆಜ್ಜೆಯಮೇಲೊಂದು ಹೆಜ್ಜೆ
ಉಸುಕಿನಲ್ಲೊಂದು ಆಳದ ಗುರುತು
ನಿಮಗೆ ಕಾಣಲೇ ಇಲ್ಲ
ನಿಮ್ಮ ಕನಸೊಳಗೆ ನಾನು ಬರಲಿಲ್ಲವೆಂದಿರಿ
ಕನಸುಗಣ್ಣಿನ ನನ್ನ ನೋಟಕೆ ನಿಮ್ಮ ನೋಟ ಬೆರೆಯಲಿಲ್ಲ
ಬಾಗಿದ ಕಣ್ರೆಪ್ಪೆ ನಿಮಗೆ ಪ್ರಿಯವಾಗಿತು
ನನ್ನ ಕಣ್ ಬಿಂಬವಾದ ನಿಮ್ಮ ಕನಸು
ಕನಸು ತೋಯ್ದು ಹರಿದ ನಿರೀಕ್ಷೆಯ ಹನಿ
ನಿಮ್ಮ ಕಲ್ಪನೆಯ ಹುಡುಕಾಟದಲಿ ಇಂಗಿಹೋಯಿತು
ಅವಳು ಹುಡುಗಿಯೇ...? ಎಂಬ ನಿಮ್ಮ ಪ್ರಶ್ನೆಯೊಂದಿಗೆ...
Subscribe to:
Post Comments (Atom)
chinnagidhe kavana :) mundhina barahakke kaayuththene....
ReplyDeleteNice one.. heege bariri
ReplyDeleteಕಲ್ಪನೆ ಮತ್ತು ವಾಸ್ತವಗಳನ್ನು ಚೆನ್ನಾಗಿಯೇ ಚಿತ್ರಿಸಿದ್ದೀರಿ.
ReplyDeleteನಿಮ್ಮ ಶೈಲಿ ಮತ್ತು ಅದು ತಟ್ಟುವ ರೀತಿ ಎರಡೂ ಅನನ್ಯವಾಗಿವೆ.
ಶಭಾಷ್
ನನ್ನ ಬ್ಲಾಗಿಗೆ ಒಮ್ಮೆ ಬನ್ನಿ
ನಿಮಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು